ಅಭಿಪ್ರಾಯ / ಸಲಹೆಗಳು

ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಯೋಜನೆಗಳು

ಸಾರ್ವಜನಿಕ ಉದ್ದಿಮೆಗಳ ಇಲಾಖೆಯಲ್ಲಿ ಮೂರು ಮುಂದುವರೆದ ಯೋಜನೆಗಳಿವೆ:

ತರಬೇತಿ ಕಾರ್ಯಕ್ರಮಗಳು:
ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ರಾಜ್ಯದ 60 ಸಾರ್ವಜನಿಕ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರ ವರ್ಗದವರಿಗೆ, ಖಾಸಗಿ ಸಂಸ್ಥೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ತಾಂತ್ರಿಕ, ಆಡಳಿತಾತ್ಮಕ, ಆರ್ಥಿಕ, ಮಾನವ ಸಂಪನ್ಮೂಲ ನಿರ್ವಹಣೆಯ ಬಗ್ಗೆ  ತರಬೇತಿ ನೀಡಲಾಗುತ್ತದೆ. ರಾಜ್ಯದ 2019-20 ನೇ ಸಾಲಿನ ಆಯವ್ಯಯದಲ್ಲಿ ಸದರಿ ಕಾರ್ಯಕ್ರಮಕ್ಕೆ ರೂ. 1.1 ಕೋಟಿಗಳನ್ನು ನಿಗದಿಪಡಿಸಲಾಗಿತ್ತು. 2019-20 ನೇ ಸಾಲಿನಲ್ಲಿ ಒಟ್ಟು 11 ತರಬೇತಿ ಕಾರ್ಯಕ್ರಮಗಳನ್ನು [1)Elements of Costing for Non-Finance People 2)Statutory Compliance Management in State PSEs 3)Contract Management Programme 4)Goods and Service Tax 5)Use of Big Data for Company Operations (Data Analytics & Management) 6)Energy Audit & Conservation in Electrical Energy System 6)Motivational Methodologies for Performance Improvement 7)Theme Based Costing-Focus Cost Control and Management, Budgeting and Variance Reporting and Control Mechanism 8) Karnataka Transparency in Public Procurement 9)Cost Reduction, Cost Control & Activity Based Cost Management 10)Auditing & Various types of Audit 11)Purchase & Inventory Management programmes] 7 ಖಾಸಗಿ ಸಂಸ್ಥೆಗಳ [1)Centre for Professional Excellence & Management Studies, Bangalore 2)Sri Vadiraja Institute of Management Studies, Bengaluru 3)Centre for Sustainable Development, Bengaluru 4)Corp Wizard, Bengaluru 5)National Productivity Council, Bengaluru 6)Centre for Enrepreneurship Development of Karnataka, Dharwad 7)The Institute of Cost Accounts of India, Bengaluru] ಮೂಲಕ ಆಯೋಜಿಸಿದ್ದು, 23 ಸಾರ್ವಜನಿಕ ಉದ್ದಿಮೆಗಳ 354 ಅಧಿಕಾರಿ/ನೌಕರರು ಈ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಸಿರುತ್ತಾರೆ. ತರಬೇತಿ ಕಾರ್ಯಕ್ರಮಗಳು ಹಾಗೂ ಭಾಗವಹಿಸಿದವರ ವಿವರಗಳನ್ನು ಇಲ್ಲಿ ವೀಕ್ಷಿಸಿ.

ಸಾರ್ವಜನಿಕ ಉದ್ದಿಮೆಗಳ ಮೌಲ್ಯಮಾಪನ:
ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನವನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ/ಖಾಸಗಿ ಸಂಸ್ಥೆಗಳ ಮೂಲಕ ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಮಾಡಿಸುತ್ತದೆ. 2019-20 ನೇ ಸಾಲಿನ ಆಯವ್ಯಯದಲ್ಲಿ ಸದರಿ ಕಾರ್ಯಕ್ರಮಕ್ಕೆ ರೂ. 30.00 ಲಕ್ಷಗಳನ್ನು ನಿಗದಿಪಡಿಸಲಾಗಿತ್ತು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ವರದಿಯನ್ನು ನಿರೀಕ್ಷಿಸಿದೆ. ಸರ್ಕಾರದ ಆದೇಶವನ್ನು ಇಲ್ಲಿ ವೀಕ್ಷಿಸಿ.

ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ:
ಸಾರ್ವಜನಿಕ ಉದ್ದಿಮೆಗಳನ್ನು ಪ್ರೇರೇಪಿಸಲು, ಗುರುತಿಸಲು, ಪ್ರಶಂಸಿಸಲು ಪ್ರತಿ ಸಾಲಿನಲ್ಲಿಯೂ ಆಯ್ದ 05 ಸಾರ್ವಜನಿಕ ಉದ್ದಿಮೆಗಳಿಗೆ ಮಾನ್ಯ ಮುಖ್ಯಮಂತ್ರಿಯವರ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸದರಿ ಪ್ರಶಸ್ತಿಯು ರೂ.150.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರ ಹಾಗೂ ಮೊಮೆಂಟೋವನ್ನು ಹೊಂದಿರುತ್ತದೆ. 2019ನೇ ಸಾಲಿನ ಪ್ರಶಸ್ತಿಯನ್ನು 1) ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ 2) ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ 3) ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ 4) ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ 5) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಗಳಿಗೆ ತಲಾ ರೂ.30.00 ಲಕ್ಷಗಳ ನಗದು ಮೊತ್ತವನ್ನೊಳಗೊಂಡಂತೆ ನೀಡಲಾಗಿದೆ. ಸರ್ಕಾರದ ಆದೇಶವನ್ನು ಇಲ್ಲಿ ವೀಕ್ಷಿಸಿ.

ಇತ್ತೀಚಿನ ನವೀಕರಣ​ : 30-05-2020 11:47 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಾರ್ವಜನಿಕ ಉದ್ದಿಮೆಗಳ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080